Kumbha Sambhava.News

Tuesday, September 02, 2025

 

*"ಭೀಮ" ಖ್ಯಾತಿಯ ಪ್ರಿಯಾ ಅಭಿನಯದ "ಕುಂಭ‌ ಸಂಭವ" ಚಿತ್ರದ ಟೀಸರ್ ಬಿಡುಗಡೆ* .  

 

 *ಚಿತ್ರೀಕರಣr ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ ಟಿ.ಎನ್.ನಾಗೇಶ್ ನಿರ್ದೇಶನದ ಈ ಚಿತ್ರ* .

 

"ಭೀಮ" ಚಿತ್ರದ ಗಿರಿಜಾ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಪ್ರಿಯಾ ಅವರು ಟಿ.ಎನ್.ನಾಗೇಶ್ ನಿರ್ದೇಶನದ "ಕುಂಭ ಸಂಭವ" ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ‌ಈ ಚಿತ್ರದಲ್ಲೂ ಪೊಲೀಸ್ ಅಧಿಕಾರಿಯಾಗಿ ಪ್ರಿಯಾ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟೀಸರ್ ಬಿಡುಗಡೆ ಅದ್ದೂರಿಯಾಗಿ ನೆರವೇರಿತು. ಪರಿಪೂರ್ಣ ಸನಾತನ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸಂಸ್ಥಾಪಕರಾದ ಗುರೂಜಿ ಡಾ. ಶ್ರೀ ಎ. ವಿ.

ಶ್ರೀನಿವಾಸನ್

"ಕುಂಭ ಸಂಭವ" ಚಿತ್ರದ ಟೀಸರ್ ಬಿಡುಗಡೆ ಮಾಡಿ, ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಕಥಾಹಂದರವಿರುವ ಈ ಚಿತ್ರ ಭರ್ಜರಿ ಯಾಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.   

ಮಿಲ್ಕಿ ಮೂನ್ ಮೂವೀಸ್ ಲಾಂಛನದಲ್ಲಿ

ನಾಗ ನಾಯ್ಕ ,

ನರೇಶ್ ಕುಮಾರ್, ತಾರಾ.ಆರ್,  ಸುನಂದ ಹಾಗು  ಪುರುಷೋತ್ತಮ ಅವರು ನಿರ್ಮಿಸುತ್ತಿರುವ ಈ ಚಿತ್ರ ಮಂಡ್ಯ ಬಳಿ ನಡೆದ ನೈಜಘಟನೆ ಆಧರಿಸಿದ ಕಥಾಹಂದರ ಹೊಂದಿದೆ. ಯಾರು ಕೂಡ ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಉತ್ತಮ ಸಂದೇಶವನ್ನು ಈ ಚಿತ್ರದ ಮೂಲಕ ನೀಡುತ್ತಿದ್ದೇವೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ‌. ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯತ್ತಿದೆ. ಅಂದುಕೊಂಡಂತೆ  ಆದರೆ ಅಕ್ಟೋಬರ್ ನಲ್ಲೇ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ. ಇನ್ನೂ "ಭೀಮ" ಖ್ಯಾತಿಯ ಪ್ರಿಯ ಮುಖ್ಯಪಾತ್ರದಲ್ಲಿ ‌ಅಭಿನಯಿಸಿದ್ದಾರೆ‌. ಕನ್ನಡದ ಸಾಕಷ್ಟು ಅನುಭವಿ ಹಾಗೂ ಹಿರಿಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಂತ್ರಜ್ಞರ ಸಹಕಾರವನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತೇನೆ. ನಮ್ಮ ಚಿತ್ರದ ಮುಹೂರ್ತದ ದಿನ ಕೂಡ ಶ್ರೀನಿವಾಸನ್ ಗುರೂಜಿ ಅವರು ಬಂದು ಹಾರೈಸಿದ್ದರು. ಇಂದು ಅವರೇ  ಟೀಸರ್ ಬಿಡುಗಡೆ ಮಾಡಿಕೊಟ್ಟಿರುವುದು ಬಹಳ ಖುಷಿಯಾಗಿದೆ ಎಂದು ನಿರ್ದೇಶಕ

ಟಿ.ಎನ್ ನಾಗೇಶ್ ತಿಳಿಸಿದರು .

 

ನನಗೆ ನಿರ್ದೇಶಕ ನಾಗೇಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು.

ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರವಿರುವ ಈ ಚಿತ್ರದಲ್ಲಿ ಅಭಿನಯಿಸಿರುವುದು ಬಹಳ ಖುಷಿಯಾಗಿದೆ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಜಾನಕಿ ನನ್ನ ಪಾತ್ರದ ಹೆಸರು ಎಂದರು ನಟಿ ಪ್ರಿಯ.

 

ಚಿತ್ರದ ನಿರ್ಮಾಪಕರಾದ ನಾಗಾ‌ ನಾಯ್ಕ, ಪುರುಷೋತ್ತಮ, ಚಿತ್ರದಲ್ಲಿ ನಟಿಸಿರುವ ಶೋಭಿತ, ಮಧುಶ್ರೀ, ಆದಿದೇವ್  ಶಂಕರ್ ಅಶ್ವಥ್, ಅರ್ಜುನ್ ದೇವ್, ಕೋಟೆ ಪ್ರಭಾಕರ್, ವಿಜಯ್ ಚೆಂಡೂರ್, ಕಮಲ್,  ಮುಬಾರಕ್, ಛಾಯಾಗ್ರಾಹಕ ಸಿದ್ದರಾಜು, ಸಂಕಲನಕಾರ ಆಕಾಶ್ ಮಹೇಂದ್ರಕರ್ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ನಿಂಗರಾಜು  ಮತ್ತು ವಲ್ಲಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,