ಕುಂಟೆಬಿಲ್ಲೆ ಆಡಿದ ರೋಬೋಟ್
ನಾಯಕಿ ಬರದಿದ್ದರೇನಂತೆ ವಿಶೇಷ ಅತಿಥಿಯಿಂದ ಟ್ರೇಲರ್ ಬಿಡುಗಡೆ ಮಾಡಿಸಿದ ಚಿತ್ರತಂಡ
ಸಾಮಾನ್ಯವಾಗಿ ಸ್ಟಾರ್ ಕಲಾವಿದರಿಂದಲೋ ಅಥವಾ ರಾಜಕಾರಣಿ ಅಥವಾ ವಿಐಪಿಗಳಿಂದಲೋ ಸಿನಿಮಾ ಟ್ರೇಲರ್, ಟೀಸರ್, ಪೋಸ್ಟರ್, ಆಡಿಯೋ ಬಿಡುಗಡೆ ಮಾಡಿಸಲಾಗುತ್ತದೆ. ಆದರೆ, "ಕುಂಟೆಬಿಲ್ಲೆ’ ಚಿತ್ರತಂಡ ಸ್ನಾ$ಪಿ ಎಂಬ ಶ್ವಾನದಂತೆ ಓಡಾಡುವ ರೋಬೋಟ್ನಿಂದ ತಮ್ಮ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿಸಿದೆ. ಹೌದು, ಕಳೆದ ಐಪಿಎಲ್ ಸೀಸನ್ 18ರಲ್ಲಿ ಮೈದಾನದ ತುಂಬೆಲ್ಲ ಓಡಾಡುತ್ತಿದ್ದ "ಚಂಪಕ್' ರೋಬೋಟ್ ಹೋಲುವ "ಸ್ನಾ$ಪಿ’ಯನ್ನು ಮೈಸೂರು ಮೂಲದ ಪವನ್ ಎಂಬುವವರು ಹಾಂಕಾಂಗ್ನಿಂದ ಆಮದು ಮಾಡಿಸಿಕೊಂಡಿದ್ದು, ರೋಬೋಟ್ಗೂ "ಕುಂಟೆಬಿಲ್ಲೆ’ ಮೊದಲ ಸಿನಿಮಾ ಕಾರ್ಯಕ್ರಮ ಎಂಬುದು ವಿಶೇಷ. "ದಕ್ಷಯಜ್ಞ’, "ತರ್ಲೆ ವಿಲೇಜ್', "ಋತುಮತಿ’, "ಹೂವಿನ ಹಾರ’ ಚಿತ್ರಗಳ ಖ್ಯಾತಿಯ ಸಿದ್ದೇಗೌಡ ನಿರ್ದೇಶನದ ಎಂಟನೇ ಚಿತ್ರ "ಕುಂಟೆಬಿಲ್ಲೆ’. ನಾಯಕಿ ಮೇಶ್ರೀ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಕೆಲ ಹೆಸರಾಂತ ಕಲಾವಿದರು ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಲೇ ಸ್ನಾ$ಪಿಗೆ ಧನ್ಯವಾದ ತಿಳಿಸಿದ ನಿರ್ದೇಶಕ ಸಿದ್ದೇಗೌಡ, "ಇದುವರೆಗೂ ನಾನು ಗ್ರಾಮೀಣ ಜನ ಜೀವನದ ಮೇಲೆ ಬೆಳಕು ಚೆಲ್ಲುವ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದ್ದೇನೆ. "ಕುಂಟೆಬಿಲ್ಲೆ’ ಸಹ ಹಳ್ಳಿಯ ಸೊಗಡಿನ ಕಥೆ. ಲವ್, ಸಸ್ಪೆನ್ಸ್ ಅಂಶಗಳಿರುವ ಚಿತ್ರ. ಬೇಡದ ತಪ್ಪನ್ನು ಮಾಡಿ ನಮ್ಮ ಕೈಯಾರೆ ನಾವೇ ನಮ್ಮ ಪ್ರೀತಿಯನ್ನು ಹೇಗೆ ಹಾಳು ಮಾಡಿಕೊಳ್ಳುತ್ತೇವೆ ಎಂಬುದರ ಸುತ್ತ ಕಥೆ ಸಾಗುತ್ತದೆ. ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸಿದೆವು, ಇದೀಗ ಶೂಟಿಂಗ್, ಪೋಸ್ಟ್&ಪ್ರೊಡಕ್ಷನ್ ಪೂರ್ಣಗೊಳಿಸಿ ಸದ್ಯ ಸೆನ್ಸಾರ್ ಹಂತದಲ್ಲಿದ್ದೇವೆ’ ಎಂದು ಮಾಹಿತಿ ನೀಡಿದರು. ರಾಮನಗರ, ಎಚ್ಡಿ ಕೋಟೆ ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ
ಚಿತ್ರದಲ್ಲಿ ಮೂರು ಹಾಡುಗಳು ಮತ್ತು ಒಂದು ಸಾಹಸ ಸನ್ನಿವೇಶವಿದೆ. ಕುಮಾರ್ ಗೌಡ ಜಿ ಮತ್ತು ಶಿವು ಎಸ್ಬಿ ಜಂಟಿಯಾಗಿ "ಕುಂಟೆಬಿಲ್ಲೆ’ ನಿರ್ಮಿಸಿದ್ದಾರೆ. ಕುಮಾರ್ ಗೌಡ, "ಈಗ್ಗೆ 30 ವರ್ಷಗಳ ಹಿಂದೆ ಸಿನಿಮಾದಲ್ಲಿ ನಟಿಸಬೇಕು ಅಂತ ಬೆಂಗಳೂರಿಗೆ ಬಂದಿದ್ದೆ. ಆದರೆ, ಆಗ ಯಾರೂ ಪರಿಚಯವಿರಲಿಲ್ಲ. ಅವಕಾಶಗಳೂ ಸಿಗಲಿಲ್ಲ. ಹೀಗಾಗಿ ಊರಿಗೆ ವಾಪಸ್ ಹೋದೆ. ಇದೀಗ ಈ ಚಿತ್ರದ ಮೂಲಕ ನಾನು ನಿರ್ಮಾಪಕನಾಗಿ ಮತ್ತು ನನ್ನ ಮಗ ಯದು ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದೇವೆ’ ಎಂದರು. ಮತ್ತೊಬ್ಬ ನಿರ್ಮಾಪಕ ಎಸ್ಬಿ ಶಿವು, "ಇದು ನಾನು ನಿರ್ಮಿಸುತ್ತಿರುವ ಆರನೇ ಸಿನಿಮಾ. ಆದರೆ, ಗಾಂಧಿನಗರದಲ್ಲಿ ನಾನು ಯಾರು ಅಂತ ಯಾರಿಗೂ ಗೊತ್ತಿಲ್ಲ. ನಿರ್ದೇಶಕ ಜೋಗಿ ಪ್ರೇಮ್ ಅವರಿಂದ ಚಿತ್ರದ ಒಂದು ಹಾಡನ್ನು ಹಾಡಿಸೋಕೆ ಅವರ ಅಸಿಸ್ಟೆಂಟ್ ದಶಾವರ ಚಂದ್ರು ಬಳಿ ಕೇಳಿದರೆ ಐದು ಲಕ್ಷ ರೂ. ದುಡ್ಡು ತಗೊಂಡು ಬನ್ನಿ ಎಂದರು’ ಎಂದು ಬೇಸರ ವ್ಯಕ್ತಪಡಿಸಿದರು. ನಾಯಕ ಯದು ಕ್ರಿಕೆಟರ್ ಆಗುವ ಆಸೆಯನ್ನು ಬದಿಗಿಟ್ಟು, ಅಪ್ಪನ ಆಸೆ ಈಡೇರಿಸಲು ಚಿತ್ರರಂಗಕ್ಕೆ ಬಂದಿದ್ದಾರೆ. "ನಾನಿಲ್ಲಿ ಕೋಳಿ ಾರಂನಲ್ಲಿ ಕೆಲಸ ಮಾಡುವ ಬಡ ಕುಟುಂಬದ ಹುಡುಗನ ಪಾತ್ರದಲ್ಲಿ ನಟಿಸಿದ್ದೇನೆ. ಪ್ರೀತಿಯನ್ನು ಉಳಿಸಿಕೊಳ್ಳಲು ನಾಯಕ ಹೇಗೆಲ್ಲ ಕಷ್ಟಪಡುತ್ತಾನೆ ಎಂಬುದು ಚಿತ್ರದ ಒನ್ಲೈನ್' ಎಂದರು. ಶಂಕರ್ನಾಗ್ ಅವರ "ಮಾಲ್ಗುಡಿ ಡೇಸ್' ಸೇರಿ ಹಲವು ಧಾರಾವಾಹಿ, ಸಿನಿಮಾ ಮತ್ತು ನಾಟಕಗಳಿಗೆ ಕಲಾನಿರ್ದೇಶನ ಮಾಡಿರುವ ಖಾನ್ ಸರ್ "ಕುಂಟೆಬಿಲ್ಲೆ’ಯ ಕಲಾನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಮತ್ತೊಬ್ಬ ನಟ ಧೀರಜ್ ಅವರಿಗಿದು ಐದನೇ ಸಿನಿಮಾ. ನಾಯಕನ ಗೆಳೆಯನಾಗಿ ಅವರು ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಸಿನಿಮಾ ಇದೇ ಸೆ. 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.