*ಮುಹೂರ್ತ ಆಚರಿಸಿಕೊಂಡ ಭೈರಾ*
*ಭೈರಾ* ಚಿತ್ರದ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಲವ್ಲಿ ಸ್ಟಾರ್ ಪ್ರೇಮ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ’ಗೂಳಿಹಟ್ಟಿ’ ’ಸಾಗುತ ಸಾಗುತ ದೂರ ದೂರ’ ಚಿತ್ರಗಳ ಖ್ಯಾತಿಯ *ಮಹೇಶ್ ಸಿದ್ದು ಗ್ಯಾಪ್ ನಂತರ ನಾಯಕ*ನಾಗಿ ನಟಿಸುತ್ತಿದ್ದಾರೆ. ಎರಡು ನೂರಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜಕರಾಗಿ ಸೇವೆ ಸಲ್ಲಿಸಿರುವ *ಅಕುಲ್.ಎನ್ ಸಿನಿಮಾಕ್ಕೆ ಕಥೆ ಬರೆದು ಆಕ್ಷನ್ ಕಟ್* ಹೇಳುತ್ತಿರುವುದು ನಾಲ್ಕನೇ ಅನುಭವ. ಖುಷಿ ಕನಸು ಕ್ರಿಯೇಶನ್ಸ್ ಅಡಿಯಲ್ಲಿ *ಅಮಿತ್ ಪೂಜಾರಿ ನಿರ್ಮಾಣ* ಮಾಡುತ್ತಿದ್ದಾರೆ. *ಅಶೋಕ್.ಡಿಡಿಎನ್ ಸಹ ನಿರ್ಮಾಪಕ* ರಾಗಿ ಗುರುತಿಸಿಕೊಂಡಿದ್ದಾರೆ.
ಚಟ್ಟ ಕಟ್ಟುವುದಕ್ಕೂ, ಚಪ್ಪರ ಹಾಕುವ ಯಾವುದೇ ಕೆಲಸಕ್ಕೂ ಸೈ ಅನ್ನುವ ಪಾತ್ರದಲ್ಲಿ ಮಹೇಶ್‌ಸಿದ್ದು. *ಬಜಾರಿ ಹುಡುಗಿಯಾಗಿ ಶ್ವೇತಾಸುರೇಂದ್ರ ನಾಯಕಿ*. ಉಳಿದಂತೆ ಜಾಕ್ ಜಾಲಿಜಾಲಿ, ಯಶ್‌ಶೆಟ್ಟ, ರವಿಕಾಳೆ, ವರ್ಧನ್, ಸಂಪತ್‌ಕುಮಾರ್, ಕಾಕ್ರೋಚ್ ಸುಧಿ, ಬಿ.ಚಂದಿರಧರ, ವೀಣಾಶೆಟ್ಟಿ ಮುಂತಾದವರು ಅಭಿನಯಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಸಿನಿಮಾವು ಸಿಲಿಕಾನ್ ಸಿಟಿಯ ಸ್ಥಳೀಯ ರೌಡಿಗಳ Zಟುವಟಿಕೆಗಳು. ಅಮಾಯಕ ಹುಡುಗನನ್ನು ಗುರಿ ಮಾಡಿದರೆ, ಆತ ಯಾವ ಪರಿಮಿತಿಗೆ ಹೋಗುತ್ತಾನೆ. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಈತನನ್ನು ಹೇಗೆ ಬಳಸಿಕೊಳ್ಳುತ್ತಾರೆ. ಅಂತಿಮವಾಗಿ ಇದೆಲ್ಲಾವನ್ನು ಜಯಸಿಕೊಂಡು ಬರುತ್ತಾನಾ? ಜತೆಗೆ ಸುಂದರ ಪ್ರೇಮಕಥೆ, ಅಮ್ಮನ ಬಾಂಧವ್ಯ ಮನಕಲುಕುವ ಸನ್ನಿವೇಶಗಳನ್ನು ತೋರಿಸ ಲಾಗುತ್ತದೆ. ಮಹೇಶ್ ಅವರು ಸಾಹಸದಲ್ಲಿ ಪ್ರವೀಣ್‌ರಾಗಿದ್ದರಿಂದ ನಾಲ್ಕು ಜಬರ್‌ದಸ್ತ್ ಫೈಟ್‌ಗಳು ಇರಲಿದೆ. ಬೆಂಗಳೂರು ಸುತ್ತಮುತ್ತ ಅದರಲ್ಲೂ ಹೆಚ್ಚಾಗಿ ಕಲಾಸಿಪಾಳ್ಯ, ಓಕಳಿಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದು ಅಕುಲ್.ಎನ್ ಮಾಹಿತಿ ನೀಡಿದರು.
ಭರ್ಜರಿ ಚೇತನ್, ಅನಿರುದ್ದ್ ಶಾಸ್ತ್ರೀ, ನಾಗಾರ್ಜುನ ಶರ್ಮ ಸಾಹಿತ್ಯದ ಗೀತೆಗಳಿಗೆ ಮಂಜು ಮಹದೇವ್ ಸಂಗೀತ ಸಂಯೋಜಿಸಿದ್ದಾರೆ ಛಾಯಾಗ್ರಹಣ ಎಸ್.ಹಾಲೇಶ್, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ವಿಕ್ರಂಮೋರ್-ವಿನೋದ್ ಅವರದಾಗಿದೆ. ಮುಂದಿನ ವಾರದಿಂದ ಶೂಟಿಂಗ್ ಶುರು ಮಾಡಿಕೊಳ್ಳಲು ತಂಡವು ಯೋಜನೆ ರೂಪಿಸಿಕೊಂಡಿದೆ.