ಹೊಸಬರ ಕನಸಿಗೆ ಧ್ರುವ ಸರ್ಜಾ ಸಾಥ್
‘ಮಗ್ನೇ’ ಮಾಸ್ ಆಲ್ಬಂ ಸಾಂಗ್ ರಿಲೀಸ್
ಸಿನಿಮಾ ರಂಗದ ಕನಸು ಹೊತ್ತು ಚಿತ್ರರಂಗದಲ್ಲಿ ಸಾಧಿಸಬೇಕು ಎಂದು ಬರೋರು ಲಕ್ಷಾಂತರ ಮಂದಿ. ಆ ಲಕ್ಷಾಂತರ ಮಂದಿಗಳಲ್ಲಿ ಕೆಲವರನ್ನ ಮಾತ್ರ ಜನರು ಲಕ್ಷವಿಟ್ಟು ನೋಡ್ತಾರೆ. ಕಾರಣ ಅವರಲ್ಲಿ ಅಡಗಿರುವ ಪ್ರತಿಭೆ. ಇಲ್ಲೊಬ್ಬ ಪ್ರತಿಭಾವಂತನನ್ನು ಸ್ಯಾಂಡಲ್ವುಡ್ನ ‘ಕೆ.ಡಿ’ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗುರುತಿಸಿದ್ದಾರೆ , ಆತನ ಪ್ರಯತ್ನವನ್ನ ಬೆನ್ತಟ್ಟಿ ಭೇಷ್ ಎಂದಿದ್ದಾರೆ. ಹಾಗಾದ್ರೆ ಆ ಪ್ರತಿಭೆ ಯಾರು ಅನ್ನೋ ಪ್ರಶ್ನೆ ಗೆ ಉತ್ತರ ವಾಲೀಸ್ ಸಂತೋಷ್.ಎನ್.
ವಾಲೀಸ್ ಸಂತೋಷ್ ಪ್ರತಿಭವಂತ ನೃತ್ಯ ಪಟು , ಡ್ಯಾನ್ಸ್ ಕೊರಿಯೋಗ್ರಫರ್. ಮಾಗಡಿಯ ರೈತಾಪಿ ಕುಟುಂಬದಲ್ಲಿ ಜನಿಸಿದ ವಾಲೀಸ್ ಸಂತೋಷ್ ಸಿನಿಮಾ ರಂಗದ ಕನಸು ಹೊತ್ತು , ಡ್ಯಾನ್ಸ್ ಕೊರಿಯೋಗ್ರಫರ್ ಫಿಲ್ಡ್ನಲ್ಲಿ ಫಿಲ್ಡಿಂಗ್ಗೆ ಇಳಿದಿದ್ದಾರೆ. ಅನೇಕ ಹೇಸರಾಂತ ಕನ್ನಡ ಕೊರಿಯೋಗ್ರಫರ್ಸ್ಗಳ ಜೊತೆ ಡ್ಯಾನ್ಸರ್ ಆಗಿ, ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ , ಕನ್ನಡದ ಡಿಕೆಡಿ , ತೆಲುಗಿನ ಡಿ ಶೋ ಜೊತೆಗೆ ತಮಿಳಿನ ರಿಯಾಲಿಟಿ ಶೋಗಳಲ್ಲಿ ಕೊರಿಯೋಗ್ರಫರ್ ಆಗಿಯೂ ಕೆಲಸ ಮಾಡಿರುವ ಅನುಭವ ಹೊಂದಿರುವ ವಾಲೀಸ್ ಸಂತೋಷ್ ಈಗ ಆಲ್ಬಂ ಸಾಂಗ್ ಒಂದರ ಮೂಲಕ ಕನ್ನಡಿಗರ ಆಶೀರ್ವಾದ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.
ತಾವೇ ಒಂದು ತಂಡ ಕಟ್ಟಿ ಗೋಡೆಯಂಗೆ ನಿಲ್ಲ ಬೇಕು ಅನ್ನೋ ಮಾನೋಭಾವದಿಂದ ವಾಲೀಸ್ ಫ್ಲಿಕ್ಸ್ ಅನ್ನೋ ಸಂಸ್ಥೆ ಕಟ್ಟಿ ಮಗ್ನೇ , ಚಟ್ವಂತ ಕೊಟ್ರೆ ಮುಟ್ ನೋಡಬೇಕು ಅನ್ನೋ ಮಾಸ್ ಆಲ್ಬಂ ಮೂಲಕ ಬರುತ್ತಿದ್ದಾರೆ. ಇವ್ರ ಈ ಪ್ರಯತ್ನಕ್ಕೆ ಹನುಮ ಭಕ್ತ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ. ಸಾಂಗ್ ಲಾಂಚ್ ಮಾಡಿ ಗುಡ್ ಎಂದು ಕಳೆಸಿದ್ದಾರೆ.
ಈ ವಿಚಾರವನ್ನ ಪತ್ರಿಕಾ ಮಿತ್ರರ ಜೊತೆ ಹಂಚಿಕೊಂಡಿರುವ ವಾಲೀಸ್ ಸಂತೋಷ್ ಮುಂದೆ ಹೀರೋ ಆಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡೋ ಕನಸಿನ ಯೋಜನೆಯಲ್ಲಿ ಇದ್ದಾರೆ. ತನ್ನೆದೆಯಾದ ಡ್ಯಾನ್ಸ್ ಕ್ಲಾಸ್ಗಳನ್ನ ನಡೆಸುತ್ತಿರುವ ವಾಲೀಸ್ ಒಂದು ಯುವ ತಂತ್ರಜ್ಞರ ತಂಡಕಟ್ಟಿದ್ದಾರೆ. ತನ್ ಲೈಫ್ನಲ್ಲಿ ಆದ ಅವಮಾನವನ್ನ ಸ್ಫೂರ್ತಿಯಾಗಿ ಇಟ್ಕೊಂಡು ಮಗ್ನೇ ಆಲ್ಬಂ ಸಾಂಗ್ ಮಾಡಿದ್ದಾರೆ ವಾಲೀಸ್ ಸಂತೋಷ್.
ಯುವಕ ಮಾರುತಿ ರಾವ್ ಸಂಕಲನ ಮತ್ತು ಛಾಯಾಗ್ರಹಣ ಮಗ್ನೇ ಆಲ್ಬಂ ಸಾಂಗ್ ಗಿದೆ. ಧ್ರುವ ಕೇಶವ್ ಸಂಗೀತ , ಸಂತೋಷ್ ಗೆಳೆಯ ತೇಜಸ್ ಕುಮಾರ್ ಸಾಹಿತ್ಯ ಈ ಹಾಡಿಗಿದೆ. ಪಕ್ಕಾ ಮಾಸ್ ಸ್ಟೈಲ್ನಲ್ಲಿ ಒಬ್ಬ ಕಮರ್ಶಿಯಲ್ ಹೀರೋ ಗೆ ನೀಡುವ ಬಿಲ್ಡಪ್ ಸಾಂಗ್ ರೀತಿ ಹಾಡು ಮೂಡಿಬಂದಿದ್ದು ಱಪ್ ಶೈಲಿಯ ಟಚ್ ಇದೆ. ನೀವೇನಾದ್ರು ಈ ಮಗ್ನೇ ಹಾಡನ್ನ ಕೇಳದಿದ್ದರೆ Wallis Flics Youtube ಚಾನೆಲ್ನಲ್ಲಿ ಕೇಳಬಹುದು , ಹೊಸಬಹ ಪ್ರಯತ್ನ ಎಷ್ಟರ ಮಟ್ಟಿಗಿದೆ ಅಂತ ಪ್ರಶಂಸಿಸ ಬಹುದು..