ಚಿತ್ರ: ತಿಮ್ಮನ ಮೊಟ್ಟೆಗಳು****
ನಿರ್ದೇಶನ: ರಕ್ಷಿತ್ತೀರ್ಥಹಳ್ಳಿ
ನಿರ್ಮಾಪಕ: ಆದರ್ಶ್ ಅಯ್ಯಂಗಾರ್
ತಾರಾಗಣ: ಕೇಶವ್ ಗುತ್ತಳಿಕೆ, ಸುಚೇಂದ್ರಪ್ರಸಾದ್, ಶೃಂಗೇರಿ ರಾಮಣ್ಣ, ರಘು, ಆಶಿಕಾಸೋಮಶೇಖರ್, ಪ್ರಗತಿ, ವಿನಯ್ ಕಣಿವೆ
ಕಾಡಿನ ಕಥನ ತಿಮ್ಮನ ಮೊಟ್ಟೆಗಳು
ಮುಂದುವರೆಯುತ್ತಿರುವ ತಂತ್ರಜ್ಞಾನ, ಮತ್ತೋಂದು ಕಡೆ ಜನರ ಮೂಡ ನಂಬಿಕೆಗಳು. ಇದರ ಮಧ್ಯೆ ಪ್ರಾಣಿ-ಪಕ್ಷಿಗಳು, ಪ್ರಕೃತಿ ಇವೆಲ್ಲದರ ಮಿಶ್ರಣವೇ ‘ತಿಮ್ಮನ ಮೊಟ್ಟೆಗಳು’ ಚಿತ್ರ ಎನ್ನಬಹುದು. ಅಪ್ಪ ಅಮ್ಮನಿಗೆ ಮಕ್ಕಳು ಎಷ್ಟು ಮುಖ್ಯವೋ, ಪ್ರಾಣಿ ಪಕ್ಷಿಗಳಿಗೂ ತನ್ನ ಮೊಟ್ಟೆ, ಮರಿಗಳನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಹಾವುಗಳು ಒಮ್ಮೆಗೆ ಮೊಟ್ಟೆಗಳನ್ನಿಟ್ಟರೂ, ಅವು ಬೇರೆ ಪ್ರಾಣಿಗಳಿಗೆ ಆಹಾರವಾಗುತ್ತಿರುವುದರಿಂದ ಅದರ ಸಂತತಿ ಕಡಿಮೆಯಾಗುತ್ತಿದೆ. ಅವುಗಳನ್ನು ಕಾಪಾಡಲು ಸಂಶೋಧಕರ ತಂಡವೊಂದು ಕಾಡಿಗೆ ಬರುತ್ತದೆ. ಅಲ್ಲೆ ಹುಟ್ಟಿ ಬೆಳೆದ ತಿಮ್ಮನಿಗೆ ಶ್ರೀಮಂತರ ಅಡಿಕೆ ಮರಕ್ಕೆ ಔಷದಿ ಸಿಂಪಡಿಸುವುದು ಕಾಯಕವಾಗಿರುತ್ತದೆ
ಈತನ ಸಂಪರ್ಕದೊಂದಿಗೆ ಹಾವಿನ ಮೊಟ್ಟೆಗಳನ್ನು ಹುಡುಕುವ ಕೆಲಸ ಸಂಶೋಧಕರು ಮಾಡಲು ಮುಂದಾದಾಗ, ಊರಿನ ಮುಖಂಡ ಅದಕ್ಕೆ ಅಡ್ಡಿಪಡಿಸುತ್ತಾನೆ. ಕೊನೆಗೆ ಹೆಬ್ಬಾವು ಮೊಟ್ಟೆಗಳನ್ನು ಇಡುವ ಜಾಗವನ್ನು ತೋರಿಸಿದನೇ ಎನ್ನುವುದನ್ನು ನಾವು ಹೇಳುವುದಕ್ಕಿಂತ ತೆರೆ ಮೇಲೆ ನೋಡುವುದು ಒಳಿತು.
ನಿರ್ದೆಶಕ ರಕ್ಷಿತ್‌ತೀರ್ಥಹಳ್ಳಿ ಕಾಡಿನ ನೆಂಟು ಕಥಾ ಸಂಕಲನವನ್ನು ಆಯ್ದುಕೊಂಡು ಅದಕ್ಕೆ ಸಿನಿಮಾ ಸ್ಪರ್ಶ ಅದ್ಬುತವಾಗಿ ಕೊಟ್ಟಿದ್ದಾರೆ. ತಿಮ್ಮನಾಗಿ ಕೇಶವ್‌ಗುತ್ತಳಿಕೆ ನಟನೆಯಲ್ಲಿ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸುಚೇಂದ್ರಪ್ರಸಾದ್, ಶೃಂಗೇರಿ ರಾಮಣ್ಣ, ರಘು, ಆಶಿಕಾ ಸೋಮಶೇಖರ್ ಕಾಣಿಸಿಕೊಂಡಿದ್ದಾರೆ. ಹೇಮಂತ್ ಜೋಯಿಸ್ ಸಂಗೀತ, ಪ್ರವೀಣ್.ಎಸ್. ಛಾಯಾಗ್ರಹಣ ಸಿನಿಮಾಕ್ಕೆ ಪೂರಕವಾಗಿದೆ.
****