ಚಿತ್ರ: ಎಕ್ಸ್ ಅಂಡ್ ವೈ****
ನಿರ್ಮಾಣ: ಸತ್ಯ ಪಿಕ್ಚರ್ಸ್
ನಿರ್ದೇಶನ ಮತ್ತು ನಟನೆ: ಸತ್ಯಪ್ರಕಾಶ್
ಕಲಾವಿದರು: ಅಥರ್ವಪ್ರಕಾಶ್, ಬೃಂದಾ, ವೀಣಾಸುಂದರ್ ಮುಂತಾದವರು
ಬದುಕಲ್ಲಿ ದುಖ: ಬೇಡ ನಗು ಇರಲಿ
ಆತ್ಮವೊಂದು ನಾಲ್ಕು ದಿನದ ಪ್ಯಾಕೇಜ್‌ನಲ್ಲಿ ಭೂಮಿಗೆ ಬಂದಾಗ ಅಲ್ಲಿ ನಡೆಯುವ ಘಟನೆಗಳನ್ನು ‘ಎಕ್ಸ್ ಅಂಡ್ ವೈ’ ಚಿತ್ರದಲ್ಲಿ ನವಿರಾಗಿ ತೋರಿಸಲಾಗಿದೆ. ಆತ್ಮ ಹಾಗೂ ಮನುಷ್ಯನ ವಿವಿಧ ಮುಖಗಳ ಮಜಲುಗಳನ್ನು ಪರಿಚಯಿಸಲಾಗಿದೆ. ತಂದೆ-ತಾಯಿಯನ್ನು ಹುಡುಕಿಕೊಂಡು ಭೂಮಿಗೆ ಬಂದಾಗ ಆತನ ಹಿನ್ನಲೆಯ ಕತೆ ಬಿಚ್ಚುಕೊಳ್ಳುತ್ತದೆ. ಹಾಗಂತ ಇದನ್ನೆ ಸೀಮಿತವಾಗಿಸದೆ, ಮತ್ತಷ್ಟು ಅಂಶಗಳನ್ನು ಸೇರಿಸಿರುವುದು ನೋಡುಗರಿಗೆ ಹತ್ತಿರವಾಗಿಸುತ್ತ ಹೋಗುತ್ತದೆ. ನಮ್ಮಗಳ ಸ್ವಾರ್ಥ, ಅಸಹನೆ, ಬದುಕಿನ ಜಂಜಾಟ ಹಲವು ಸನ್ನಿವೇಶಗಳ ಮೂಲಕ ಬದುಕಿನ ಪಾಠ ಹೇಳಿಸಿಕೊಂಡು ಹೋಗುತ್ತದೆ. ಹೀಗೆ ನಾನಾ ವಿಚಾರಗಳು, ಜೀವನದ ಮೌಲ್ಯಗಳನ್ನು ಮನರಂಜನೆಯೊಂದಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿರುವುದು ಬೋರು ತರಿಸುವುದಿಲ್ಲ.
ನಿರ್ದೇಶಕ ಸತ್ಯಪ್ರಕಾಶ್ ಇಷ್ಟು ದಿನ ಕ್ಯಾಮಾರ ಹಿಂದೆ ಕೆಲಸ ಮಾಡಿದ್ದು, ಈಗ ಪ್ರಥಮ ಅನುಭವ ಎನ್ನುವಂತೆ ಸಾಮಾನ್ಯ ಮನುಷ್ಯನ ಪಾತ್ರಕ್ಕೆ ಬಣ್ಣ ಹಚ್ಚಿರುವುದು ವಿಶೇಷ. ಯುವಕನಾಗಿ ಅಥರ್ವಪ್ರಕಾಶ್ ನಟನೆ ಚೆನ್ನಾಗಿದೆ. ಬೃಂದಾಆಚಾರ್ಯ ಚೆಂದ ಕಾಣಿಸುತ್ತಾರೆ. ಕೌಶಿಕ್ ಹರ್ಷ ಸಂಗೀತ ಸಿನಿಮಾಗೆ ಮೆರುಗು ತಂದಿದೆ. ಒಟ್ಟಾರೆ ಪ್ರೇಕ್ಷಕನಿಗೆ ಮೋಸ ಮಾಡದೆ ಎರಡು ಗಂಟೆ ಆರಾಮವಾಗಿ ನೋಡುವ ಚಿತ್ರವೆಂದು ಘಂಟಾಘೋಷವಾಗಿ ಹೇಳಬಹುದು.
****