Metro.Film News

Tuesday, June 24, 2025

45

 

*'ಮೆಟ್ರೋ...ಇನ್ ದಿನೋ’ ಚಲನಚಿತ್ರ ತಂಡದಿಂದ ಬೆಂಗಳೂರಿನಲ್ಲಿ ಪ್ರಚಾರ*

 

ಅನುರಾಗ್ ಬಸು ನಿರ್ದೇಶನದ ಬಹು ನಿರೀಕ್ಷಿತ ಚಲನಚಿತ್ರ ‘ಮೆಟ್ರೋ...ಇನ್ ದಿನೋ’ ತಂಡವು ಜೂನ್ 24 ರಂದು ಬೆಂಗಳೂರಿಗೆ ಆಗಮಿಸಿತ್ತು. ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್, ಪ್ರೀತಮ್, ಗಾಯಕ ಶಶ್ವತ್ ಸಿಂಗ್ ಅವರು ಈ ಪ್ರಚಾರದಲ್ಲಿ ಭಾಗವಹಿಸಿದ್ದರು.

‘ಮೆಟ್ರೋ...ಇನ್ ದಿನೋ’ ಚಿತ್ರವು ನಾಲ್ಕು ರೀತಿಯ ಕಥೆಗಳನ್ನು ಹೊಂದಿದ್ದು, ಪ್ರತಿಯೊಂದು ಕಥೆಯು ಪ್ರೀತಿ, ನಿಷ್ಠೆ ಮತ್ತು ಆಧುನಿಕ ಸಂಬಂಧಗಳ ಭಾವನಾತ್ಮಕ ಏರಿಳಿತಗಳನ್ನು ಅನಾವರಣಗೊಳಿಸುತ್ತದೆ. ಹಾಸ್ಯಮಯವಾದರೂ ಸಹ ಹೃದಯಸ್ಪರ್ಶಿ ನಿರೂಪಣಾ ಶೈಲಿಯನ್ನು ಹೊಂದಿರುವ ಈ ಚಿತ್ರವು, ಜನರ ಜೀವನದ ಮತ್ತು ಸಂಬಂಧಗಳ ಗೊಂದಲಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಚಿತ್ರತಂಡ ತಿಳಿಸಿದೆ.

 

‘ಮೆಟ್ರೋ...ಇನ್ ದಿನೋ’ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಕೊಂಕಣಾ ಸೇನ್‌ಶರ್ಮಾ, ಅಲಿ ಫಜಲ್, ಫಾತಿಮಾ ಸನಾ ಶೇಖ್, ಅನುಪಮ್ ಖೇರ್, ಮತ್ತು ನೀನಾ ಗುಪ್ತಾ ಸೇರಿದಂತೆ ತಾರಾಗಣವಿದೆ.

 

ಈ ಚಿತ್ರವು ಜುಲೈ 4ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,