Deadly Lovers.News

Monday, June 16, 2025

25

 

*ಡೆಡ್ಲಿ ಲವರ‍್ಸ್ ಟ್ರೇಲರ್ ಬಿಡುಗಡೆ*

 

      ಕ್ಯಾಚಿ ಟೈಟಲ್ ಹೊಂದಿರುವ *ಡೆಡ್ಲಿ ಲವರ‍್ಸ್* ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ’ಹುಲಿಯಾ’ ನಿರ್ಮಾಪಕ ಗೋವಿಂದರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. *ನಾಗೇಂದ್ರ ಕಥೆ,ಚಿತ್ರಕಥೆ,ಸಂಭಾಷಣೆ,ಸಂಕಲನ, ನಿರ್ದೇಶನ ಜತೆಗೆ ಅನಘ ಎಂಟರ್ ಪ್ರೈಸಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ* ಅಖಿಲ್ ಕುಮಾರ್ ನಾಯಕ. ನವಪ್ರತಿಭೆ ತನುಪ್ರಸಾದ್ ನಾಯಕಿ. ಎಸಿಪಿಯಾಗಿ ಪ್ರೇಮಾಗೌಡ, ತಂದೆಯಾಗಿ ಭಾಸ್ಕರ್, ದುರಳನಾಗಿ ವಿನೋಧ್, ಗೃಹ ಮಂತ್ರಿಯಾಗಿ ಲಹರಿವೇಲು, ಎ.ಆರ್.ಲೋಕೇಶ್ ಮುಂತಾದವರು ನಟಿಸಿದ್ದಾರೆ. ಸಂಗೀತ ಲಯಕೋಕಿಲ, ಛಾಯಾಗ್ರಹಣ ಹೆಚ್.ಎನ್.ನರಸಿಂಹಮೂರ್ತಿ, ಸಾಹಸ ವಿಕ್ರಂಸಿಂಗ್, ಹಿನ್ನಲೆ ಶಬ್ದ ಶ್ರೀಸಾಷ್ಠ, ಕಾರ್ಯಕಾರಿ ನಿರ್ಮಾಪಕ ಎ.ಆರ್.ಲೋಕೇಶ್ ಅವರದಾಗಿದೆ. ಸಿರಿ ಮ್ಯೂಸಿಕ್ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

 ಗುರುಗಳಾದ ಎಸ್.ಉಮೇಶ್ ಬಳಿ ಕೆಲಸ ಕಲಿತುಕೊಂಡು ’ಡೆಡ್ಲಿ ಲವರ‍್ಸ್’ಗೆ ಆರು ಜವಬ್ದಾರಿಗಳನ್ನು ಹೊತ್ತುಕೊಂಡಿದ್ದೇನೆ. ಪ್ರೇಮಿಗಳಿಬ್ಬರು ಭೂಗತಲೋಕಕ್ಕೆ ಎಂಟ್ರಿಕೊಟ್ಟು ಖಳನಾಯಕನಿಗೆ ಚಳ್ಳೆಹಣ್ಣು ತಿನ್ನಿಸಿ ಡ್ರಗ್ಸ್ ಹಣವನ್ನು ಕದಿಯುತ್ತಾರೆ. ವಿಷಯ ಹೋಂ ಮಿನಿಸ್ಟರ್‌ಗೆ ತಿಳಿದು ಕೇಸನ್ನು ಎಸಿಪಿಗೆ ವಹಿಸುತ್ತಾರೆ. ಅಷ್ಟಕ್ಕೂ ಲವರ‍್ಸ್‌ಗಳೂ ಡೆಡ್ಲಿ ಆಗಲು ಕಾರಣವೇನು? ಇವರಿಬ್ಬರ ಹಿನ್ನಲೆ ಏನು? ಅಂತಿಮವಾಗಿ ದುಡ್ಡು ಯಾರಿಗೆ ದಕ್ಕುತ್ತದೆ? ಖಳನು ಸೇಡು ತೀರಿಸಿಕೊಂಡನಾ? ಅಥವಾ ಪೋಲೀಸರು ಎನ್‌ಕೌಂಟರ್ ಮಾಡಿದರಾ? ಇಂತಹ ಕುತೂಹಲ ಸನ್ನಿವೇಶಗಳು ಚಿತ್ರದಲ್ಲಿದೆ. ಮಂಚನ ಡ್ಯಾಂ, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ಮಾಧ್ಯಮದವರ ಸಹಕಾರಬೇಕೆಂದು ನಾಗೇಂದ್ರ ಕೋರಿದರು.

 

       ಇಲ್ಲಿಯವರೆಗೂ ಹದಿನೆಂಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪ್ರಶಾಂತ್ ನಾಯಕ್ ಹೊಸ ಅನುಭವ ಎನ್ನುವಂತೆ ’ತಾಂಡವ ಮೂವಿ ಮೇಕರ‍್ಸ್’ ಸಂಸ್ಥೆ ಹುಟ್ಟುಹಾಕಿ, ಇದರ ಮೂಲಕ ವಿತರಣೆ ಮಾಡುತ್ತಿದ್ದು, ಸುಮಾರು 50-60 ಕೇಂದ್ರಗಳಲ್ಲಿ ಇದೇ ತಿಂಗಳು ತೆರೆಗೆ ತರಲು ಯೋಜನೆ ರೂಪಿಸಿಕೊಂಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,