September 10.News

Monday, June 16, 2025

18

 

'ಪ್ರಪಂಚವನ್ನು ಮೆಟ್ಟಿನಿಂತ ಮಾನವ’

’ಸೆಪ್ಟೆಂಬರ್ 10' ಮೋಟಿವೇಷನ್ ಸಾಂಗ್

 

 ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ,ಯೋಚನೆ ಮಾಡಿದಾಗ ಅದಕ್ಕೆ ಒಂದಲ್ಕ ಒಂದು ಪರಿಹಾರ ಸಿಕ್ಕೇ ಸಿಗುತ್ತೆ ಎಂಬ ಸಮಾಜಮುಖಿ ಸಂದೇಶ ಇಟ್ಟುಕೊಂಡು 105  ಸಿನಿಮಾಗಳನ್ನು ನಿರ್ದೇಶಿಸಿದ  ಓಂ ಸಾಯಿ ಪ್ರಕಾಶ್ ಅವರು ಡೈರೆಕ್ಷನ್ ಮಾಡಿರುವ ಮತ್ತೊಂದು ಚಿತ್ರ ’ಸೆಪ್ಟೆಂಬರ್ 10'  ಈ ಚಿತ್ರಕ್ಕಾಗಿ ಡಾ‌.ವಿ. ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಮೋಟೊವೇಶನಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

    ಕೇಂದ್ರ ಕಿಸಾನ್ ಸಮಿತಿಯ ನಿರ್ದೇಶಕರಾದ ಆರ್.ಎಸ್‌.ರಾಜು ಅವರು ಈ ಹಾಡನ್ನು ಬಿಡುಗಡೆಗೊಳಿಸಿ ಮಾತನಾಡುತ್ತ ನನ್ನ ಗುರುಗಳಾದ ಸಾಯಿಪ್ರಕಾಶ್ ಹಾಗೂ ನನ್ನ ಒಡನಾಟ 20 ವರ್ಷಗಳದ್ದು‌. ಅವರೀಗ ಒಂದು ಸಮಾಜಮುಖಿ ಸಂದೇಶ ಇಟ್ಟುಕೊಂಡು  ’ಸೆಪ್ಟೆಂಬರ್ 10' ಎಂಬ ಚಿತ್ರವನ್ನು  ನಿರ್ದೇಶನ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಆದಂಥ ಸಾವು, ನೋವುಗಳು. ಹಸಿವು, ಕಷ್ಟ, ನಷ್ಟ  ಅನುಭವಿಸಿದ ಕೆಲವರು ತಮಗೆ  ಆತ್ಮಹತ್ಯೆ ಒಂದೇ ಪರಿಹಾರ ಎಂದು ನಿರ್ಧರಿಸಿದರು. ಹುಡುಕಿದರೆ ಎಂಥ  ಕಷ್ಟಕ್ಕಾದರೂ ಪರಿಹಾರ ಇದ್ದೇ  ಇರುತ್ತದೆ  ಎಂದು ಈ ಚಿತ್ರದ ಮೂಲಕ ಅವರು  ಹೇಳಹೊರಟಿದ್ದಾರೆ. ಇಂಥ ಉತ್ತಮ ಸಿನಿಮಾಗಳಿಗೆ ಜನರ ಪ್ರೋತ್ಸಾಹ ಬೇಕು, ನಮಗೆ ಎಷ್ಟೇ ಕೆಲಸದ ಒತ್ತಡ ಇದ್ದರೂ ಅವರಿಗಾಗಿ ಬಂದಿದ್ದೇನೆ.ಅವರ ಮನೆ ಮಗನಾಗಿ ಅವರ ಜತೆ ನಿಲ್ಲುತ್ತೇನೆ ಎಂದರಲ್ಲದೆ, ಸದ್ಯದಲ್ಲೇ ನಾನು ಅವರ ಜತೆ ಹೊಸ ಚಿತ್ರವೊಂದನ್ನು ಮಾಡುತ್ತಿದ್ದೇನೆ ಎಂದು ಅನೌನ್ಸ್ ಮಾಡಿದರು.

    ನಂತರ ಸಾಹಿತಿ ನಾಗೇಂದ್ರ ಪ್ರಸಾದ್ ಮಾತನಾಡುತ್ತ  ನಮ್ಮ ಶಾಲೆಯ ದಿನಗಳಲ್ಲಿ  ಅವರ ಸಾಲು ಸಾಲು ಸಿನಿಮಾಗಳನ್ನು ನೋಡಿಕೊಂಡು ಬೆಖೆದವನು ನಾನು. ಅವರ ಸಿನಿಮಾಗೆ ಒಂದು ಹಾಡು ಬರೆದರೆ, ನಾನೊಬ್ಬ ಸಾಹಿತಿಯಾಗಿ ಗುರುತಿಸಿಕೊಂಡಂತೆ ಎಂದು ಕಾಯುತ್ತಿದ್ದೆವು. ಇಂಥ ಒಂದು ಕಾನ್ಸೆಪ್ಟ್ ಮಾಡಿದ್ದೇನೆ‌ ೨ ಹಾಡು ಬರೆದುಕೊಡಿ ಎಂದು ಒಂದು ಲೈನ್ ಹೇಳಿದರು. ಪ್ರಪಂಚವನ್ನು ಮೆಟ್ಟಿನಿಂತ ಮಾನವ ಎಂಬ ಮೋಟಿವೇಶನಲ್ ಸಾಂಗ್ ಇದು. ಸಾವಿಗೆ ಮಾಡುವ ಧೈರ್ಯವನ್ನು ಬದುಕಲಿಕ್ಕೆ  ಮಾಡಿ ಅಂತ ಹೇಳುವ ಹಾಡಿದು. ಸಾಯಿಪ್ರಕಾಶ್ ಅವರು ತಮ್ಮ  ಬದುಕಿನ ಭಾಗವನ್ನು ಕೂಡ ಕಥೆಯಾಗಿಸಿದವರು. ಜಯಸಿಂಹ, ತನುಜಾ, ಪದ್ಮಾ ವಾಸಂತಿ, ಶ್ರೀನಿವಾಸಮೂರ್ತಿ, ಶಶಿಕುಮಾರ್, ರಮೇಶ್ ಭಟ್  ಹೀಗೆ ಅವರ ಹಿಂದಿನ ಸಿನಿಮಾಗಳಲ್ಲಿ ಮಾಡಿದ ಅನೇಕ ಹಿರಿ, ಕಿರಿಯ ಕಲಾವಿದರೆಲ್ಲ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಒಂದು ಸಿನಿಮಾದ ಕಥೆ, ಹಾಡು ಜನರ ಜೀವನದಲ್ಲಿ ಒಂದು ಸಣ್ಣ  ಬದಲಾವಣೆ ತಂದರೆ ಅದೇ ಸಿನಿಮಾದ ಸಕ್ಸಸ್. ಈ ಚಿತ್ರ ಅಂಥಾ ಕೆಲಸ ಮಾಡುತ್ರೆ  ಎಂದು ಹೇಳಿದರು. ಉಖಿದಂತೆ ದೊಂಬರ ಕೃಷ್ಣ, ಗಣೇಶರಾವ್ ಕೇಸರಕರ್ ಹಾಗೂ ಉಳಿದವರು ಚಿತ್ರ ಹಾಗೂ ನಿರಗದೇಶಕರ ಕುರಿತಂತೆ ನಾತನಾಡಿದರು.

 ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಡಾ.ಎಸ್. ರಾಜು ಅವರು

ಬೆನ್ನೆಲುಬಾಗಿ ನಿಂತು  ಬಿಡುಗಡೆಗೆ ತಮ್ಮ ಸಹಕಾರ ನೀಡುತ್ತಿದ್ದಾರೆ. 

  ನಿರ್ದೇಶಕ ಸಾಯಿಪ್ರಕಾಶ್ ಮಾತನಾಡಿ ನಾನು ೨೦೨೦ರಲ್ಲಿ ಸೆಪ್ಟೆಂಬರ್ 10  ಸಿನಿಮಾ ಪ್ರಾರಂಭ ಮಾಡಿದೆ. ಅಷ್ಟರಲ್ಲಿ ಕೊರೋನಾ ಬಂದದ್ದರಿಂದ ರಿಲೀಸ್ ಮಾಡಲಾಗಲಿಲ್ಲ. ಈಗ ಎಲ್ಕರ ಸಹಕಾರದಿಂದ ಬಿಡುಗಡೆ  ಮಾಡಲು ಹೊರಟಿದ್ದೇನೆ. ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತೇನೆ ಎಂದು ಹೇಳಿದರು. ನಟಿ ಶ್ರೀರಕ್ಷಾ, ಶಿವಕುಮಾರ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೆಜಿ.ಕೃಷ್ಣ ಚಿತ್ರದ ಛಾಯಾಗ್ರಾಹಕರು. ಮ್ಯೂಸಿಕ್ ಬಜಾರ್ ಈ ಚಿತ್ರದ ಹಾಡುಗಳನ್ನ ಹೊರತಂದಿದೆ

Copyright@2018 Chitralahari | All Rights Reserved. Photo Journalist K.S. Mokshendra,