Sathyam.Film News

Wednesday, November 08, 2023

321

ಹೊಸ ಸತ್ಯಂ

      ಎಂಬತ್ತರ ದಶಕದಲ್ಲಿ ಡಾ.ವಿಷ್ಣುವರ್ಧನ್ ಅಭಿನಯದ ‘ಸತ್ಯಂ’ ಚಿತ್ರವೊಂದು ತೆರೆಕಂಡಿತ್ತು. ಕಟ್ ಮಾಡಿದರೆ  ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸಿದ್ದಗೊಂಡಿದೆ. ಅಶೋಕ್‌ಕಡಬ ನಿರ್ದೇಶನ ಮಾಡಿದ್ದು, ಶ್ರೀ ಮಾತಾ ಕ್ರಿಯೇಶನ್ಸ್ ಅಡಿಯಲ್ಲಿ ಮಾಂತೇಶ್.ವಿ.ಕೆ ಬಂಡವಾಳ ಹೂಡಿರುವುದು ಹೊಸ ಅನುಭವ. ಅಧ್ಯಾತ್ಮಕ ಚಿಂತಕರಾದ ಜಂಬುನಾಥ್ ಸ್ವಾಮಿ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ತಾತ ಮೊಮ್ಮಗನ ಕಥೆಯು ಎರಡು ಕಾಲಘಟ್ಟದಲ್ಲಿ ನಡೆಯುತ್ತದೆ. ಜಮೀನ್ದಾರು ಕುಟುಂಬದ ಎಳೆಯೊಂದಿಗೆ ಪ್ರಸ್ತುತ ಬದುಕಿನ ಸನ್ನಿವೇಶಗಳು ಸೇರಿಕೊಂಡಿದೆ. ಪಂಜುರ್ಲಿ ದೈವ ಆರಾಧಿಸುವ ರಾಜ ಮನೆತನದ ಕುಟುಂಬದಲ್ಲಿ ಒಂದು ಕಳಂಕ ನಡೆದಿರುತ್ತದೆ. ಅದರಿಂದ ಸಾವು ನೋವುಗಳು ಆಗಿದ್ದು, ಆ ವಂಶದ ಕುಡಿ ೪೦ ವರ್ಷದ ನಂತರ ಭೂತಕೋಲದ ಪೂಜೆಗೆಂದು ಊರಿಗೆ ಬಂದಾಗ ಏನಾಗುತ್ತದೆ ಎಂಬುದನ್ನು ಸೆಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಪ್ರೀತಿ ಅಂಶಗಳನ್ನು ಒಳಗೊಂಡಿದೆ.

       ಕೆಂಪ, ಕರಿಯ-೨ದಲ್ಲಿ ನಟಿಸಿದ್ದ ಸಂತೋಷ್‌ಬಾಲರಾಜ್ ನಾಯಕ. ಕನ್ನಡತಿ ಖ್ಯಾತಿಯ ರಂಜನಿರಾಘವನ್ ನಾಯಕಿ. ರವಿಬಸ್ರೂರು ಸಂಗೀತ, ಸಿನಿಟೆಕ್ ಸೂರಿ ಛಾಯಾಗ್ರಹಣ, ಕೆ.ವಿ.ರಾಜು-ಕಿನ್ನಾಳ್‌ರಾಜ್ ಸಂಭಾಷಣೆ ಇದೆ. ಎ೨ ಮ್ಯೂಸಿಕ್ ಸಂಸ್ಥೆಯು ಒಳ್ಳೆ ಬೆಲೆ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆಯಂತೆ.

 

Copyright@2018 Chitralahari | All Rights Reserved. Photo Journalist K.S. Mokshendra,