Thaytha.Film Teaser.News

Wednesday, August 02, 2023

308

ಹಾರರ್ ಚಿತ್ರದಲ್ಲಿ ಶಿವನ ಗೀತೆ

     ‘ತಾಯ್ತ’ ಚಿತ್ರದ ಟೀಸರ್ ಮೊನ್ನೆಯಷ್ಟೇ ಬಿಡುಗಡೆಗೊಂಡಿದ್ದು ಎಲ್ಲಾ ಕಡೆಗಳಲ್ಲಿ ವೈರಲ್ ಆಗುತ್ತಿರುವುದು ತಂಡಕ್ಕೆ ಸಂತಸ ತಂದಿದೆ. ಪ್ರಚಾರದ ಎರಡನೇ ಹಂತವಾಗಿ ರಾಮ್‌ನಾರಾಯಣ್ ಬರೆದಿರುವ ‘ಶಿವನೇ ಕಾಪಾಡು’ ಹಾಡು ಬಿಡುಗಡೆ ಪ್ರದರ್ಶನ ಸಮಾರಂಭ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ವೇದಿಕೆಯಲ್ಲಿ ಮೌಲನಾ ಆರಿಕ್ ಪಾಷಾ, ಮೋಕ್ಷಗುಂಡಂ ಗುರೂಜಿ, ಫಾದರ್ ಜಾನ್ ಆಂಥೋಣಿ ಸೇರಿದಂತೆ ಮೂವರು ಧರ್ಮಗುರುಗಳು ಮತ್ತು ನಟ ಸಾಧುಕೋಕಿಲ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ದೇಶನ ಮಾಡಿರುವ ಲಯಕೋಕಿಲಾ ಹೇಳುವಂತೆ ತುಂಬಾ ಹೆದರಿಕೊಂಡಾಗ ತಾಯ್ತ ಕಟ್ಟಿಸಿಕೊ ಎಂದು ಹೇಳುತ್ತಾರೆ. ಹಾರರ್, ಥ್ರಿಲ್ಲರ್, ಕಾಮಿಡಿ ಕಥೆ ಹೊಂದಿರುವುದರಿಂದ ಇದೇ ಹೆಸರು ಸೂಕ್ತ ಅಂತ ಇಡಲಾಗಿದೆ. ಸೋದರ ಸಾಧುಕೋಕಿಲ, ಪುಷ್ಪಸ್ವಾಮಿ, ಶೋಭರಾಜ್, ಭಾಮ, ವಂದನ, ಕಾರ್ತಿಕ್, ಭಾನುಪ್ರಿಯ,ಪ್ರೀತಿ,ಲಾವಣ್ಯ, ರೋಜಾ ಮುಂತಾದವರು ನಟಿಸಿದ್ದಾರೆ ಎನ್ನುತ್ತಾರೆ.

ಎಂ.ಎಸ್.ಪ್ರೊಡಕ್ಷನ್ ಲಾಂಛನದಲ್ಲಿ ಶಾಹಿದ್ ನಿರ್ಮಾಣ ಜತೆಗೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.  ಸಹ ನಿರ್ಮಾಪಕರಾಗಿ ಸಂತೋಷ್ ಇರುತ್ತಾರೆ. ನಾಯಕ ರಿಯಾನ್, ಖುಷಿ ಹೆಸರಿನ ಪಾತ್ರದಲ್ಲಿ ಹರ್ಷಿಕಾಪೂರ್ಣಚ್ಚಾ ಕಾಲೇಜು ವಿದ್ಯಾರ್ಥಿಯಾಗಿ ನಾಯಕಿ. ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಏನೇನು ಘಟನೆಗಳು ನಡೆಯುತ್ತದೆ ಎಂಬುದು ಒನ್‌ಲೈನ್ ಸ್ಟೋರಿಯಾಗಿದೆ. ಚಿಕ್ಕಮಗಳೂರು, ಬೇಲೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾವು ಸದ್ಯದಲ್ಲೆ ತೆರೆಗೆ ಬರುವ ಸಾದ್ಯತೆ  ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,