Shivajisuratkal 2.Film News

Friday, March 31, 2023

265

ವೈರಲ್ ಆಯ್ತು ಶಿವಾಜಿ ಸುರತ್ಕಲ್- ಟ್ರೇಲರ್

      ‘ಶಿವಾಜಿ ಸುರತ್ಕಲ್-೨’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಎಲ್ಲಾ ಕಡೆಗಳಿಂದ ಉತ್ತಮ ಪ್ರಶಂಸೆ ಬರುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ರಮೇಶ್‌ಅರವಿಂದ್ ಶಿವಾಜಿ ಯಾವುದಾದರೂ ಕೇಸ್ ತೆಗೆದುಕೊಂಡರೆ ‘ಒಂದಾ ಜೈಲಿಗೆ’, ‘ಇಲ್ಲವಾ ಸ್ಮಶಾನಕ್ಕೆ’ ಎಂದು ಪ್ರಸಿದ್ದಿ. ಭಾಗ-೨ರಲ್ಲಿ ಆತ ಯಾವ ಕೇಸ್ ತೆಗೆದುಕೊಳ್ಳುತ್ತಾನೆ ಎಂಬ ಕುತೂಹಲಕ್ಕೆ ಸದ್ಯದಲ್ಲೆ ಉತ್ತರ ಸಿಗಲಿದೆ. ಭಾಗ-೧ ಚಿತ್ರವನ್ನು ಇದೇ ಜಾಗದಲ್ಲಿ ರಾಹುಲ್‌ಡ್ರಾವಿಡ್ ಕುಟುಂಬದೊಂದಿಗೆ ಒಟ್ಟಿಗೆ ನೋಡಿದ್ದೇವು. 

ಇಂದು ಮೊದಲ ಗೀತೆ ಹೊರಬಂದಿದೆ ಎಂದರು.

      ನಿರ್ದೇಶಕ ಆಕಾಶ್‌ಶ್ರೀವತ್ಸ ಹೇಳುವಂತೆ ಗೀತೆಯಲ್ಲಿ ಸಂಗೀತಶೃಂಗೇರಿ ಕಾಣಿಸಿಕೊಂಡಿದ್ದಾರೆ. ರಮೇಶ್ ಸರ್ ಸಹ ಜೀಪ್‌ನಲ್ಲೂ ಕಾಣಿಸುತ್ತಾರೆ. ಕುತೂಹಲ ಹಾಗೇ ಇರಲಿ. ಏಪ್ರಿಲ್ ೧೪ರಂದು ಬಿಡುಗಡೆಯಾಗುತ್ತಿದೆ. ಅಂದು ಉತ್ತರ ಸಿಗಲಿದೆ ಎನ್ನುತ್ತಾರೆ.

       ನಿರ್ದೇಶಕರು ‘ಟ್ವಿಂಕಲ್’ ಸಾಹಿತ್ಯ ಒದಗಿಸಿದ್ದರೆ, ಜ್ಯೂಡೋಸ್ಯಾಂಡಿ ಸಂಗೀತದ ಜತೆಗೆ ಗೀತೆಗೆ ಧ್ವನಿಯಾಗಿದ್ದಾರೆ. ರಾಧಿಕಾನಾರಾಯಣ್, ಮೇಘನಾಗಾಂವ್ಕರ್, ಸಂಗೀತಶೃಂಗೇರಿ, ವಿನಾಯಕ್‌ಜೋಷಿ, ರಘುರಮನಕೊಪ್ಪ, ವಿದ್ಯಾಮೂರ್ತಿ,ಪುನೀತ್.ಬಿ.ಎ ಉಪಸ್ತಿತರಿದ್ದರು.  

 

Copyright@2018 Chitralahari | All Rights Reserved. Photo Journalist K.S. Mokshendra,