Dildar.Film News

Friday, March 31, 2023

227

ದಿಲ್ದಾರ್ ಪೋಸ್ಟರ್ ಬಿಡುಗಡೆ ಮಾಡಿದ ಕ್ರೇಜಿಸ್ಟಾರ್

        ‘ಪಡ್ಡೆಹುಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಹಿರಿಯ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್.ಕೆ.ಮಂಜು ಅವರ ಮೂರನೇ ಚಿತ್ರ ‘ದಿಲ್‌ದಾರ್’ ಮುಹೂರ್ತ ಸಮಾರಂಭವು ಮೊನ್ನೆಯಷ್ಟೇ ನಡೆಯಿತು. ಡಾ.ರವಿಚಂದ್ರನ್ ಬಲೂನ್‌ಗಳನ್ನು ಒಡೆಯುವುದರ ಮೂಲಕ ಪೋಸ್ಟರ್‌ನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.  ನಾಗತ್ತಿಹಳ್ಳಿ ಚಂದ್ರಶೇಖರ್ ಕ್ಯಾಮಾರ ಚಾಲನೆ ಮಾಡಿದರು. ‘ಬ್ಯಾಡ್ ಮ್ಯಾನರ್ಸ್’ ಮತ್ತು ‘ಅದ್ದೂರಿ ಲವರ್’ ಚಿತ್ರಗಳಲ್ಲಿ ನಟಿಸಿರುವ ಪ್ರಿಯಾಂಕಾಕುಮಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

       ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮಧುಗೌಡ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶ್ರೇಯಸ್‌ಮಂಜು ಮಾತನಾಡಿ ರವಿ ಸರ್ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ಪ್ರತಿಯೊಬ್ಬ ನಿರ್ದೇಶಕರಿಂದಲೂ ನಾನು ಒಂದೊಂದು ಟಿಪ್ಸ್ ತೆಗೆದುಕೊಳ್ಳುತ್ತೇನೆ. ಯಶ್ ಅವರು ಪ್ರೋತ್ಸಾಹ ಕೊಡುತ್ತಿದ್ದಾರೆ. ಇದೊಂದು ಕಾಲೇಜ್ ಲವ್ ಸ್ಡೋರಿಯಾಗಿದೆ. ಭಾನುವಾರದಿಂದ ಶೂಟಿಂಗ್ ತಾಲೀಮು ನಡೆಸಲಿದ್ದೇವೆ ಎಂದರು. ಅರ್ಜುನ್‌ಜನ್ಯಾ ಸಂಗೀತ, ಗಗನ್‌ಗೌಡ ಛಾಯಾಗ್ರಹಣ, ರವಿವರ್ಮ ಸಾಹಸ, ರಾಜೇಶ್‌ಸಾಲುಂಡಿ ಸಂಭಾಷಣೆ ಇರಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,