Prabhutva.Film News

Friday, March 03, 2023

250

ಪ್ರಭುತ್ವ ಹಾಡುಗಳ ಸಮಯ

        ರವಿರಾಜ್.ಎಸ್.ಕುಮಾರ್ ನಿರ್ಮಾಣ, ಆರ್.ರಂಗನಾಥ್ ನಿರ್ದೇಶನ ‘ಪ್ರಭುತ್ವ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಮತದಾನದ ಮಹತ್ವ ಸಾರುವ ಅಂಶಗಳು ಇರಲಿದೆ. ಇಂಡಿಯನ್ ಪಾಲಿಟಿಕ್ಸ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ.  ಚೇತನ್‌ಚಂದ್ರ ನಾಯಕ. ಪಾವನಗೌಡ ನಾಯಕಿ. ಉಳಿದಂತೆ ಶರತ್‌ಲೋಹಿತಾಶ್ವ, ವಿಜಯ್‌ಚೆಂಡೂರು, ಡ್ಯಾನಿ ಮುಂತಾದವರು ನಟಿಸಿದ್ದಾರೆ. 

ಡಾ.ವಿ.ನಾಗೇಂದ್ರಪ್ರಸಾದ್-ಕವಿರಾಜ್-ಚೇತನ್‌ಕುಮಾರ್-ಹರಿಸಂತೋಷ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಎಮಿಲ್ ಸಂಗೀತ ಸಂಯೋಜಿಸಿದ್ದು, ಕಾರ್ತಿಕ್ ಹಾಗೂ ಸುಪ್ರಿಯಾರಾಮ್ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಜೆಂಕಾರ್ ಮ್ಯೂಸಿಕ್ ಮೂಲಕ ಮೆಲೋಡಿ ಸಾಂಗ್ ಹೊರ ಬಂದಿದೆ.

      ಛಾಯಾಗ್ರಹಣ ಕೆ.ಎಸ್.ಚಂದ್ರಶೇಖರ್, ಕಥೆ ಮೇಘಡಹಳ್ಳಿ ಡಾ.ಶಿವಕುಮಾರ್, ಸಂಭಾಷಣೆ ವಿನಯಮೂರ್ತಿ, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ಮಾಸ್‌ಮಾದ-ಥ್ರಿಲ್ಲರ್‌ಮಂಜು-ವಿನೋದ್-ವಿಕ್ರಂ, ನೃತ್ಯ ಮೋಹನ್-ಮುರಳಿ-ಧನುಕುಮಾರ್-ಕಂಬಿರಾಜು  ಅವರದಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,