Darbar.Film News

Monday, June 05, 2023

285

ತೆರೆಗೆ ಸಿದ್ದ ದರ್ಬಾರ್

     ಹಿರಿಯ ಸಾಹಿತಿ, ಸಂಗೀತ ಸಂಯೋಜಕ ಮತ್ತು ನಟ ವಿ.ಮನೋಹರ್ ದೀರ್ಘ ಕಾಲದ ಗ್ಯಾಪ್ ನಂತರ ‘ದರ್ಬಾರ್’ ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸತೀಶ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಸುಮಾರು ೨೩ ವರ್ಷಗಳ ನಂತರ ಸಾಹಿತಿ, ನಟ ವಿ.ಮನೋಹರ್ ನಿರ್ದೇಶನ ಮಾಡಿದ್ದಾರೆ. ರಾಜಕೀಯ ವಿಡಂಬನೆ ಸಾರುವ ಗೀತೆಯನ್ನು ಉಪೇಂದ್ರ ಹಾಡಿರುವುದು ವಿಶೇಷ. 

       ಹಳ್ಳಿಯೊಂದರಲ್ಲಿ ನಡೆಯುವ ರಾಜಕೀಯ, ಅಧಿಕಾರಕ್ಕಾಗಿ ಅಲ್ಲಿನ ಮುಖಂಡರು ನಡೆಸುವ ಲಾಭಿ. ಇದನ್ನೆಲ್ಲ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಜಾಹ್ವವಿ ನಾಯಕಿ. ಉಳಿದಂತೆ ಎಂ.ಎನ್.ಲಕ್ಷೀದೇವಿ, ಸಾಧುಕೋಕಿಲ, ಅಶೋಕ್, ನವೀನ್.ಡಿ.ಪಡೀಲ್, ಹುಲಿಕಾರ್ತಿಕ್ ಮುಂತಾದವರು ಅಭಿನಯಿಸಿದ್ದಾರೆ. ಟೈಟಲ್‌ಸಾಂಗ್‌ಗೆ ಚಂದನ್‌ಶೆಟ್ಟಿ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಸಾಮ್ರಾಟ್.ಎಸ್, ಸಾಹಸ ಮಾಸ್‌ಮಾದ-ವಿನೋಧ್ ಅವರದಾಗಿದೆ. ಮಂಡ್ಯ, ಮದ್ದೂರು ಹಾಗೂ ಕೋಲಾರ ಸಮೀಪದ ಮಾಲೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾವು ಜೂನ್ ೯ರಂದು ಬಿಡುಗಡೆಯಾಗಲಿದೆ. 

 

Copyright@2018 Chitralahari | All Rights Reserved. Photo Journalist K.S. Mokshendra,