Thugs Of Ramaghada.News

Sunday, December 18, 2022

268

ಥಗ್ಸ್ ಆಫ್ ರಾಮಘಡ ಟ್ರೇಲರ್ ಮೆಚ್ಚಿದ ಡಾಲಿ ಧನಂಜಯ್

       ‘ಥಗ್ಸ್ ಆಫ್ ರಾಮಘಡ’ ಚಿತ್ರವು ಫಸ್ಟ್‌ಲುಕ್ ಹಾಡಿನ ಮೂಲಕ ಗಮನ ಸೆಳೆದಿದ್ದು, ಈಗ ಟ್ರೇಲರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಮೊನ್ನೆ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಧನಂಜಯ್ ಮಾತನಾಡಿ ಇಡೀ ತಂಡದ ಕೆಲಸ ನೋಡಿ ಖುಷಿ ಆಯ್ತು. ನಿರ್ದೇಶಕರು ತುಂಬಾ ಒಳ್ಳೆ ತಂಡವನ್ನು ಕಟ್ಟಿಕೊಂಡು, ಉತ್ತಮ ಕಲಾವಿದರನ್ನು ಇಟ್ಟುಕೊಂಡು ನೈಜ ಘಟನೆ ಆಧರಿಸಿದ ಚಿತ್ರ ಮಾಡಿದ್ದಾರೆ. ಪ್ರಚಾರವನ್ನು ಕೂಡ ಕ್ರಿಯೇಟೀವ್ ಆಗಿ ಮಾಡುತ್ತಿದ್ದಾರೆ. ವರ್ಷದ ಮೊದಲ ಚಿತ್ರ ಹಿಟ್ ಆಗಲಿ. ಉತ್ತರ ಕರ್ನಾಟಕ ಭಾಗದಿಂದ ಇನ್ನಷ್ಟು ನಿರ್ದೇಶಕರು, ಕಲಾವಿದರು ಚಿತ್ರರಂಗಕ್ಕೆ ಬರಲಿ. ಆ ಭಾಗದ ಕಥೆಗಳನ್ನು ಹೇಳಲಿ ಅಂತ ಶುಭ ಹಾರೈಸಿದರು.

ಚಂದನ್‌ರಾಜ್,ಅಶ್ವಿನ್‌ಹಾಸನ್, ಮಹಾಲಕ್ಷೀ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಉಳಿದಂತೆ ಸೂರ್ಯಕಿರಣ್, ಪ್ರಭುಹೊಸದುರ್ಗ, ಟೈಗರ್‌ಗಂಗ, ಜಗದೀಶ್, ರಾಘವೇಂದ್ರ, ವಿಶಾಲ್‌ಪಾಟೀಲ್, ರವಿಸಾಲಿಯನ್ ಮುಂತಾದವರು ಅಭಿನಯಿಸಿದ್ದಾರೆ.

      ಯಾದಗಿರಿ ಮೂಲದ ನಿರ್ದೇಶಕ ಕಾರ್ತಿಕ್‌ಮಾರಲಭಾವಿ ಹೇಳುವಂತೆ ಊರಿನಲ್ಲಿ ಹಿರಿಯರು ಹಿಂದೆ ನಡೆದ ಘಟನೆಗಳ ಬಗ್ಗೆ ಕಥೆ ಹೇಳುತ್ತಿದ್ದರು. ಅದರಿಂದ ಸ್ಪೂರ್ತಿ ಪಡೆದುಕೊಂಡು ಚಿತ್ರಕಥೆಯನ್ನು ಬರೆದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹ ನೀಡಬೇಕೆಂದು ಕೋರಿಕೊಂಡರು.

    ಭಾರತ್ ಟಾಕೀಸ್‌ನಡಿ ಜೈಕುಮಾರ್,ಕೀರ್ತಿರಾಜ್ ನಿರ್ಮಾಣ ಮಾಡಿರುವುದು ಹೊಸ ಅನುಭವ. ವಿವೇಕ್‌ಚಕ್ರವರ್ತಿ ಸಂಗೀತ, ಮನುದಾಸಪ್ಪ ಛಾಯಾಗ್ರಹಣ, ಶ್ರೀಧರ್ ಸಂಕಲನವಿದೆ. ಅಂದಹಾಗೆ ಸಿನಿಮಾವು ಜನವರಿ ೬ರಂದು ತೆರೆಗೆ ಬರುತ್ತಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,