Namma Hudugaru.Film News

Wednesday, June 15, 2022

342

ನಮ್ಮ ಹುಡುಗರು ಹಾಡು ಪಾಡು

       ಉಪೇಂದ್ರ ಅಣ್ಣನ ಮಗ ನಿರಂಜನ್‌ಸುಧೀಂದ್ರ ಅಭಿನಯದ ‘ನಮ್ ಹುಡುಗರು’ ಚಿತ್ರವು ತೆರೆಗೆ ಬರೋದಕ್ಕೆ ಸಿದ್ದವಾಗಿದೆ. ಪುನೀತ್‌ರಾಜ್‌ಕುಮಾರ್ ಧ್ವನಿಯಾಗಿರುವ ಗೀತೆಗೆ ಅಭಿಮಾನ್‌ರಾಯ್ ಸಂಗೀತ ಸಂಯೋಜಿಸಿದ್ದಾರೆ. ನಂತರ ಮಾತನಾಡಿದ ನಿರಂಜನ್‌ಉಪೇಂದ್ರ ನಾನು ಭರಮ ಹೆಸರಿನಲ್ಲಿ ಮಂಡ್ಯಾ ಕಡೆಯ ಮುಗ್ದ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಪಾತ್ರದ ಪೋಷಣೆ ಚೆನ್ನಾಗಿದೆ. ಲವ್ ಸ್ಟೋರಿ ಜೊತೆಗೆ ಫ್ಯಾಮಲಿ ಡ್ರಾಮ ಇರುವಂತಹ ಸಿನಿಮಾವೆಂದು ಹೇಳಿಕೊಂಡರು. ಮೊದಲ ಸಿನಿಮಾದಲ್ಲೆ ಒಳ್ಳೆಯ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ ಅಂತಾರೆ ನಾಯಕಿ ರಾಧ್ಯಾ. ಒಂದು ಸುಳ್ಳಿನಿಂದ ಆಗುವ ಅನಾಹುತದ ಬಗ್ಗೆ ಚಿತ್ರ ತೆಗೆದುಕೊಂಡು ಹೋಗುತ್ತದೆಂದು ನಿರ್ದೇಶಕ ಎಚ್.ಬಿ.ಸಿದ್ದು ಮಾಹಿತಿ ನೀಡಿದರು,

      ಕೆ.ಕೆ.ಅಶ್ರಫ್ ನಿಮಾಪಕರಾಗಿ ಹೊಸ ಅನುಭವ. ತಾರಗಣದಲ್ಲಿ ವಸಿಷ್ಟಸಿಂಹ, ಅಲೋಕ್, ಪ್ರವೀಣ್, ಮಾರುತಿ.ಬಿ.ಹೆಚ್, ಶರತ್‌ಲೋಹಿತಾಶ್ವ, ಭವ್ಯ, ರಾಧಾರಾಮಚಂದ್ರ, ಯತಿರಾಜ್, ರಾಕ್‌ಲೈನ್ ಸುಧಾಕರ್ ಮುಂತಾದವರು ನಟಸಿದ್ದಾರೆ. ಹೆಚ್.ಕೆ.ಚಿದಾನಂದ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಭಜರಂಗಿಮೋಹನ್-ಹೈಟ್ ಮಂಜು ನೃತ್ಯ, ವಿನೋಧ್ ಸಾಹಸವಿದೆ. ಗೋಲ್ಡನ್ ಆರ್ಟ್ಸ್ ಅರ್ಪಿಸುವ ಚಿತ್ರವು ಜುಲೈ ೮ರಂದು ತೆರೆಗೆ ಬರುವ ಸಾಧ್ಯತೆ ಇದೆ. 

 

 

    

     

    

Copyright@2018 Chitralahari | All Rights Reserved. Photo Journalist K.S. Mokshendra,