ಅಂಬುಜಾ ಟೀಸರ್ ಬಿಡುಗಡೆ
ನೈಜ ಘಟನೆ ಆಧಾರಿತ ‘ಅಂಬುಜ’ ಚಿತ್ರದ ಟೀಸರ್ ಕಲಾವಿದರ ಸಂಘದಲ್ಲಿ ಬಿಡುಗಡೆಗೊಂಡಿತು. ಕಥೆ,ಸಾಹಿತ್ಯ ಬರೆದು ನಿರ್ಮಾಣ ಮಾಡಿರುವುದು ಕಾಶಿನಾಥ್.ಡಿ.ಮಡಿವಾಳರ್. ನಿರ್ದೇಶಕ ಶ್ರೀನಿಹನುಮಂತರಾಜು ಅವರಿಗೆ ಎರಡನೇ ಅವಕಾಶ. ರಜನಿ ಮಾತನಾಡಿ ಸಿನಿಮಾ ತುಂಬಾ ವಿಶೇಷವಾಗಿದೆ. ಲಂಬಾಣಿ ವೇಷ ಭೂಷಣ ಕಣ್ಣಿಗೆ ಹಬ್ಬ, ಚಿತ್ರೀಕರಣದಲ್ಲಿ ಅವರು ನಮ್ಮನ್ನು ಸ್ವೀಕರಿಸಿದ ರೀತಿ ಎಲ್ಲವು ಮರೆಯಲಿಕ್ಕೆ ಆಗುವುದಿಲ್ಲ. ಮೊದಲ ದಿನ ಲಂಬಾಣಿ ವೇಷ ಹಾಕಿಕೊಂಡಾಗ ತಲೆ ನೋವಾಗುತ್ತಿತ್ತು. ಆಮೇಲೆ ಸರಿಹೊಂದಿತು ಎಂದರು.
ಕಥೆ ಬರೆದಾಗ ಚೆನ್ನಾಗಿದೆ ಅನಿಸಿತು. ಗೊತ್ತಿಲ್ಲದ ವಿಚಾರಗಳನ್ನು ಜನರಿಗೆ ಹೇಳಬೇಕು ಎನಿಸಿತು. ಆದಾದ ಮೇಲೆ ನಿರ್ದೇಶಕರೊಂದಿಗೆ ಮಾತನಾಡಿದಾಗ ಅವರು ಕೂಡ ಇಷ್ಟಪಟ್ಟರು. ಸಿನಿಮಾ ಮಾಡೋಣವೆಂದು ನಿರ್ಧಾರ ತೆಗೆದುಕೊಂಡಾಗ ತಾನೇ ತಾನಾಗಿ ಪಾತ್ರಗಳು ಸಿಗುತ್ತಾ ಹೋಯಿತು. ಅಂಬುಜಾ ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, ಮನೆಮಂದಿಯೆಲ್ಲ ಕುಳಿತು ನೋಡಬಹುದಾದ ಚಿತ್ರವೆಂದು ನಿರ್ಮಾಪಕರು ಖುಷಿ ಹಂಚಿಕೊಂಡರು.
ತಾರಗಣದಲ್ಲಿ ಶುಭಾಪೂಂಜಾ, ಪದ್ಮಜರಾವ್, ರಜನಿ, ಕಾಮಿಡಿ ಕಿಲಾಡಿಗಳು ಗೋವಿಂದೇಗೌಡ, ಮತ್ತು ನಿರ್ದೇಶಕ ಶರಣಯ್ಯ, ಪ್ರಿಯಾಂಕಕಾಮತ್, ಸಂದೇಶ್‌ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಪ್ರಸನ್ನಕುಮಾರ್.ಎಂ.ಎಸ್ ಸಂಗೀತ, ಮುರಳಿಧರ.ಎಂ ಛಾಯಾಗ್ರಹಣ, ವಿಜಯ್.ಎಂ.ಕುಮಾರ್ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಗದಗ, ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.