Suthradaari.Film News

Friday, October 07, 2022

252

ಸೂತ್ರಧಾರಿಯಾಗಿ ಚಂದನ್ಶೆಟ್ಟಿ

        ‘ಎಲ್ರ ಕಾಲೆಳೆಯುತ್ತೆ ಕಾ’ ಚಿತ್ರದ ಮೂಲಕ ನಾಯಕನಾಗಿ ಪರಿಚಯಗೊಂಡಿದ್ದ ರಾಪರ್ ಚಂದನ್‌ಶೆಟ್ಟಿ ಈಗ ‘ಸೂತ್ರಧಾರಿ’ ಸಿನಿಮಾದಲ್ಲಿ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರಣ್‌ಕುಮಾರ್ ನಿರ್ದೇಶನ ಮಾಡುತ್ತಿದ್ದು, ನವರಸನ್ ಬಂಡವಾಳ ಹೂಡುತ್ತಿದ್ದಾರೆ. ಮೊನ್ನೆ ನಡೆದ ಸಮಾರಂಭದಲ್ಲಿ ಹಿರಿಯ ಪ್ರಚಾರಕರ್ತ ಸುಧೀಂದ್ರವೆಂಕಟೇಶ್ ಶೀರ್ಷಿಕೆ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನವರಸನ್ ನನ್ನ ನಿರ್ಮಾಣದ ಐದನೇ ಚಿತ್ರವಿದು, ಈವರೆಗೂ ನಮ್ಮ ಸಂಸ್ಥೆಯ ಮೂಲಕ ೧೮೦ಕ್ಕೂ ಹೆಚ್ಚು ಚಿತ್ರಗಳ ಇವೆಂಟ್ ನಡೆಸಿಕೊಟ್ಟಿದ್ದೇನೆ. ನಿರ್ದೇಶನ ಹಾಗೂ ವಿತರಕನಾಗಿ ಕಾರ್ಯನಿರ್ವಹಿಸಿದ್ದೇನೆ. ಅಪೂರ್ವ ನಾಯಕಿಯಾಗಿದ್ದಾರೆಂದು ಹೇಳಿದರು.

      ಹಿಂದಿನ ಚಿತ್ರದ ಕಥೆಯು ರೆಟ್ರೋ ಶೈಲಿಯಲ್ಲಿತ್ತು. ಇದು ಮರ್ಡರ್ ಮಿಸ್ಟರಿಯಾಗಿದೆ. ಚಿತ್ರಕ್ಕಾಗಿ ಹನ್ನೆರಡು ಕೆ.ಜಿ. ತೂಕ ಇಳಿಸಿಕೊಂಡಿದ್ದು, ಸಂಗೀತವನ್ನು ನಾನೇ ಮಾಡುತ್ತಿದ್ದೆನೆಂದು ಚಂದನ್‌ಶೆಟ್ಟಿ ತಿಳಿಸಿದರು. ಗಣೇಶ್‌ನಾರಾಯಣ್, ತಬಲನಾಣಿ ಮತ್ತಿತರರು ತಾರಬಳಗದಲ್ಲಿದ್ದಾರೆ. ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಸಂಭಾಷಣೆ ಕಿನ್ನಾಳ್‌ರಾಜ್, ಸಂಕಲನ ಸತೀಶ್‌ಚಂದ್ರಯ್ಯ ಚಿತ್ರಕ್ಕಿದೆ. ಇದೇ ತಿಂಗಳು ೧೦ರಿಂದ ಶೂಟಿಂಗ್ ಶುರುವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,