Operation U.Film Pooja.News

Saturday, September 10, 2022

432

ಸೈಕಲಾಜಿಕಲ್ ಸೆಸ್ಪೆನ್ಸ್ ಥ್ರಿಲ್ಲರ್ ಚಿತ್ರ

        ಆಕರ್ಷಕ ಶೀರ್ಷಿಕೆ ‘ಆಪರೇಶನ್ ಯು’ ಚಿತ್ರದ ಮುಹೂರ್ತ ಸಮಾರಂಭವು ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು. ರಾಘವೇಂದ್ರರಾಜ್‌ಕುಮಾರ್ ಅಭಿನಯಿಸುತ್ತಿದ್ದು, ಮೊದಲ ದೃಶ್ಯಕ್ಕೆ ಮಂಗಳಾರಾಘವೇಂದ್ರರಾಜ್‌ಕುಮಾರ್ ಕ್ಲಾಪ್ ಮಾಡಿ ಪತಿಯ ಸಿನಿಮಾಕ್ಕೆ ಶುಭ ಹಾರೈಸಿದರು. ‘ಕನ್ನಡ ದೇಶದೊಳ್’ ‘ಕಲಿವೀರ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಅವಿರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಮಗಳ ಸಲುವಾಗಿ ವಿದ್ಮಯಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿರುವ ಮಂಜುನಾಥ್ ಶ್ರೀಲಂಕಾಗೆ ಹೋದಾಗ ಕೇಳಿದ ಕಥೆಯಂತೆ. ಸೈಕಲಾಜಿಕಲ್ ಸೆಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಸಾಮಾನ್ಯ ಮನುಷ್ಯನನ್ನು ತಟ್ಟುವ, ಬಡಿದೆಬ್ಬಿಸುವ ಎಚ್ಚರಿಕೆ ನೀಡುವ ಏಳೆಯನ್ನು ಹೊಂದಿದೆ.

      ಉತ್ತಮ್‌ಪಾಲಿ, ಯಶ್‌ಶೆಟ್ಟಿ ನಾಯಕರುಗಳಾಗಿ ಅಭಿನಯಿಸುತ್ತಿದ್ದು, ಸೋನಲ್‌ಮಾಂಥೆರೋ, ಲಾಸ್ಯನಾಗರಾಜ್ ನಾಯಕಿಯರು. ಉಳಿದಂತೆ ರವಿಶಂಕರ್, ಧರ್ಮ, ಅವಿನಾಶ್, ಮಾಳವಿಕಅವಿನಾಶ್, ಸ್ವರ್ಶಾರೇಖಾ, ಗೋವಿಂದೇಗೌಡ ಮುಂತಾದವರು ನಟಿಸುತ್ತಿದ್ದಾರೆ. ರಾಘವೇಂದ್ರ.ವಿ ಸಂಗೀತ, ಹಾಲೇಶ್.ಎಸ್. ಸಂಕಲನವಿದೆ. ಬೆಂಗಳೂರು ಸುತ್ತಮುತ್ತ ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,