Seva Daas.Film Teaser Lanch.

Tuesday, March 22, 2022

259

 

*ಏಪ್ರಿಲ್ ಒಂದರಂದು ಬಹುಭಾಷಾ ನಟ ಸುಮನ್ ಅಭಿನಯದ"ಸೇವಾ ದಾಸ್" ತೆರೆಗೆ .*

 

 *ಬಂಜಾರ ಭಾಷೆಯ ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆ.*

 

ಕೊರೋನ ಕಳೆದ ಮೇಲೆ ಸಿನಿರಂಗದಲ್ಲಿ ಸುಗ್ಗಿ ಸಂಭ್ರಮ.‌ ಮತ್ತೆ ಹಳೆ ವೈಭವ ಮರಳಿ ಬರುತ್ತಿದೆ.

 

ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ನಟಿಸಿರುವ ಬಹಭಾಷಾ ನಟ ಸುಮನ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಸೇವಾ ದಾಸ್" ಬಂಜಾರ ಚಿತ್ರ ಏಪ್ರಿಲ್ ಒಂದರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

 

ನಾನು ಚಿತ್ರರಂಗಕ್ಕೆ ಬಂದು ನಲವತ್ತು ವರ್ಷ ಕಳೆದಿದೆ.‌ ನನ್ನ ತಂದೆ-ತಾಯಿ ಮಂಗಳೂರಿನವರು.‌ ನಾನು ಹುಟ್ಟಿದ್ದು ಚೆನ್ನೈ ನಲ್ಲಿ.

ಈ ತನಕ‌ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಇದೇ ಮೊದಲ ಬಾರಿಗೆ ಬಂಜಾರ ಚಿತ್ರದಲ್ಲಿ ನಟಿಸಿದ್ದೇನೆ. ಸಂತ ಸೇವಾಲಾಲ್ ಅವರ‌ ಕೃಪೆಯಿಂದ ಉತ್ತಮ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೇ ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮ ಹಾರೈಕೆಯಿರಲಿ ಎಂದರು ನಟ ಸುಮನ್.‌

ಬಂಜಾರ ಭಾಷೆ ಮಾತನಾಡುವ ಜನ ಕರ್ನಾಟಕ ಸೇರಿದಂತೆ, ದೇಶದ ವಿವಿಧೆಡೆ ವಾಸವಾಗಿದ್ದಾರೆ. ಈಗ‌ ವಿದೇಶದಲ್ಲೂ ನೆಲೆಸಿದ್ದಾರೆ. ‌ ನಮ್ಮ ಜನಾಂಗದ ಶಕ್ತಿಯಾಗಿರುವ ಸಂತ ಸೇವಾಲಾಲ್ ಅವರ ಕೃಪೆಯಿಂದ ಇದೇ ಮೊದಲ ಬಾರಿಗೆ ಈ ಚಿತ್ರವನ್ನು ಭಾರತದ ವಿವಿಧ ಕಡೆ ಬಿಡುಗಡೆ ಮಾಡುತ್ತಿದ್ದೇವೆ.‌ ವಿದೇಶದಲ್ಲೂ "ಸೇವಾ ದಾಸ್" ಬಿಡುಗಡೆಯಾಗುತ್ತಿರುವುದು ಖುಷಿ ತಂದಿದೆ ಎಂದರು ನಿರ್ಮಾಪಕ‌ ಸೀತಾರಾಂ ಬಡಾವತ್.

 

ಬಂಜಾರ ಸಮುದಾಯದ ಸದ್ಗುರುಗಳು, ಮುಖಂಡರು, ಮತ್ತೊಬ್ಬ ನಿರ್ಮಾಪಕ ವಿನೋದ್ ರೈನಾ, ಚಿತ್ರದಲ್ಲಿ ಅಭಿನಯಿಸಿರುವ ಅನೇಕ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 ಕೆ.ಪಿ.ಎನ್ ಚೌಹಾನ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,