Sumant Kranthi Prod.Film News

Saturday, July 03, 2021

372

 

ಸುಮಂತ್ ಕ್ರಾಂತಿ ನಿರ್ಮಾಣದ

         ಚಿತ್ರದಲ್ಲಿ ಪ್ರಜ್ವಲ್ ಹೀರೋ

 

   ಈ ಹಿಂದೆ  ಹಾರರ್ ನಾನಿ, ಮಾಸ್ ಬರ್ಕ್ಲಿ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಕಾಲಚಕ್ರ  ನಿರ್ದೇಶನ ಮಾಡಿದ್ದ ಸುಮಂತ್ ಕ್ರಾಂತಿ ಅವರೀಗ ಪಕ್ಕಾ ಆ್ಯಕ್ಷನ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಸುಮಂತ್ ಕ್ರಾಂತಿ ಅವರ  ರಶ್ಮಿಫಿಲಂಸ್ ಬ್ಯಾನರ್ ಮೂಲಕ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಇದಾಗಿದ್ದು,  ಪೊಗರು ಖ್ಯಾತಿಯ ನಂದಕಿಶೋರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.  

.  ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಂತ್ ಈ ಮೂಲಕ ಸ್ಟಾರ್  ನಿರ್ದೇಶಕ ಹಾಗೂ ಸ್ಟಾರ್ ನಟನ ಜೊತೆ ಬಿಗ್ ಬಜೆಟ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸದ್ಯ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ದೊರೆತಿದ್ದು, ಸದ್ಯದಲ್ಲೇ ಚಿತ್ರದ ಟೈಟಲ್ ಹಾಗೂ  ಫಸ್ಟ್ ಲುಕ್  ರಿಲೀಸ್ ಮಾಡುವುದಾಗಿ ನಿರ್ಮಾಪಕ ಸುಮಂತ್ ಕ್ರಾಂತಿ ಅವರು ತಿಳಿಸಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,