Phantom.News

Tuesday, August 25, 2020

327

ಫ್ಯಾಂಟಮ್ ಚಿತ್ರದಲ್ಲಿ ಕಿರುತೆರೆ ನೀರೆ

        ಬಹು ನಿರೀಕ್ಷಿತ ‘ಫ್ಯಾಂಟಮ್’ ಚಿತ್ರದಲ್ಲಿ ಹೊಸ ಹೊಸ ಸುದ್ದಿಗಳು ಬರುತ್ತಲೆ ಇದೆ. ಈಗ ಬಂದ ಮಾಹಿತಿಯಂತೆ ಕಿರುತೆರೆಯ ಪ್ರತಿಭಾವಂತ ನಟಿ ನೀತಾಅಶೋಕ್ ಸೇರ್ಪಡೆಯಾಗಿದ್ದಾರೆ. ‘ಯಶೋಧೆ’ ‘ನಾ ನಿನ್ನ ಬಿಡಲಾರೆ’ ಮತ್ತು ‘ನೀಲಾಂಬರಿ’ ಧಾರವಾಹಿಗಳನ್ನು ವೀಕ್ಷಿಸಿದವರಿಗೆ ಇವರ ಪರಿಚಯವಾಗಿರುತ್ತದೆ. ಅಪರ್ಣಾಬಲ್ಲಾಳ್ ಆಲಿಯಾಸ್ ಪನ್ನಾ ಹೆಸರಿನ ಪಾತ್ರ. ಬಾಂಬೆಯಲ್ಲಿ ಹುಟ್ಟಿ ಬೆಳೆದಿದ್ದರಿಂದ ಹಿಂದಿ ಮಿಶ್ರಿತ ಕನ್ನಡ ಮಾತನಾಡುವುದು ಅಭ್ಯಾಸ. ಅಡ್ವೆಂಚರ್ ನೇಚರ್ ಇರುವ ಹುಡುಗಿಯಾಗಿ ಎಲ್ಲಾ ತಿಳಿದುಕೊಳ್ಳಬೆಕು ಎನ್ನುವ ಕುತೂಹಲ ತೋರಿಸುವ ಗುಣವುಳ್ಳವಳು. ನಿರ್ದೇಶಕ ಅನೂಪ್‌ಭಂಡಾರಿ ಈಕೆಯ ಕುರಿತಂತೆ ವಿವರಗಳನ್ನು ನೀಡಿದ್ದಾರೆ.

      ನಿರೂಪ್‌ಭಂಡಾರಿಗೆ ಜೋಡಿಯಾಗುತ್ತಿದ್ದಾರೆ. ಲಂಡನ್‌ನಿಂದ ಬರುವ ಸಂಜೀವ್ ಗಾಂಭೀರ ಹಾಗೂ ಮುಂಬೈನಿಂದ ಬರುವ ಅಪರ್ಣಬಲ್ಲಾಳ ನಡುವಿನ ಪ್ರೇಮಕತೆ  ಕೂಡ ಚಿತ್ರದ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ. ಜಾಕ್‌ಮಂಜು ನಿರ್ಮಾಣ ಮಾಡುತ್ತಿರುವ ಸಿನಿಮಾದ ಚಿತ್ರೀಕರಣ ಹೈದರಬಾದ್‌ದಲ್ಲಿ ನಡೆಯುತ್ತಿದ್ದು, ಶೇಕಡ ೪೦ರಷ್ಟು ಮುಗಿದಿದೆ. ಮುಂದಿನ ಭಾಗದ ಶೂಟಿಂಗ್ ಇನ್ನೋವೇಟಿವ್ ಫಿಲಿಂಸಿಟಿಯಲ್ಲಿ ನಡೆಯಲಿದೆ ಎಂಬುದಾಗಿ ಸುದ್ದಿ ಲಭ್ಯವಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,